ಅಮ್ಮ ಅರಿಯದೇ ಹೋದೆ, ನಾನಿಟ್ಟ ಗೆಲುವಿನ ಪ್ರತಿ ಹೆಜ್ಜೆ ನಿನ್ನ ತ್ಯಾಗದ ಫಲವೆಂದು ಕಾಡುವೆನಾ ದೈವವನು, ಮರುಜನ್ಮದಲು ನನ್ನ ನಿನ್ನೊಡಲ ಕುಡಿಯಾಗಿಸೆಂದು. ಮತ್ತೊಮ್ಮೆ ಮುದುಡಿ ಮಲಗುವಾಸೆ ನಿನ್ನ ಮಡಿಲಲ್ಲಿ ಮರೆತು ನನ್ನೆಲ್ಲ ಚಿಂತೆ ಜನ್ಮ ಜನ್ಮಾಂತರಕೂ ನನ್ನದಾಗಿರಲಿ ಈ ಬತ್ತದ ಮಮತೆಯ ಒರತೆ. |
Monday, August 17, 2009
ಮಮತೆ
Sunday, August 16, 2009
ಹಕ್ಕು
ಅನುಕ್ಷಣವು ಸಂತಸದ ಸವಿ ತಂದಿಹುದು
ನಾ ಬಯಸಿದೈಸಿರಿ, ನಿನ್ನೊಡನಾಟದ ಬದುಕು.
ಗೆಳೆಯಾ, ನಿನ್ನ ನೋವಲ್ಲೂ ನನ್ನ ಪಾಲಿಹುದು
ಕನಿಕರಿಸಿ ಕಸಿಯದಿರು ಆ ನನ್ನ ಹಕ್ಕು.
ನಾ ಬಯಸಿದೈಸಿರಿ, ನಿನ್ನೊಡನಾಟದ ಬದುಕು.
ಗೆಳೆಯಾ, ನಿನ್ನ ನೋವಲ್ಲೂ ನನ್ನ ಪಾಲಿಹುದು
ಕನಿಕರಿಸಿ ಕಸಿಯದಿರು ಆ ನನ್ನ ಹಕ್ಕು.
Subscribe to:
Posts (Atom)

