ಹುಡುಕಾಡಿದೆ ನಾನೆಂಟು ದಿಕ್ಕೂ ನೀ ಕಾಣಲಿಲ್ಲ, ತಡಕಾಡಿದೆ ಎನ್ನ ಎಡಕು ಬಲಕು ನಿನ್ನ ಸುಳಿವಿಲ್ಲ. ಬಳಿಯಿಲ್ಲ ನೀನೆಂದು ದುಃಖಿಸಲು ನೀ ಕಂಡೆ ಎನ್ನ ಕಣ್ಣೀರ ಹನಿಯಲ್ಲಿ, ಕಪ್ಪಿಟ್ಟ ಮೊಗ ನೋಡೆ ಕನ್ನಡಿಯ ದಿಟ್ಟಿಸಿದೆ ನಿನ ಕಂಡೆ ಎನ್ನ ಕಣ್ಣಲ್ಲಿ. ಎಲ್ಲಿರುವೆ ನೀನೆಂದು ಮರುಕ್ಷಣವೆ ನಾನರಿತೆ ಎನ್ನ ಹೃದಯಾಂತರಾಳವೆ ನಿನ್ನ ಮನೆ, ಧನ್ಯೆ ನಿನಗೆ ಜನ್ಮ ನೀಡಿದ ಮಾತೆ ಅವಳೇ ಎನ್ನ ಮನದ ಭಾವನೆ. |
Friday, July 31, 2009
ಹುಡುಕಾಟ
ಬಾಲ್ಯದ ಸೊಗಸು
ಕಾರು ಬಂಗಲೆಯಿಲ್ಲ, ಒಡವೆ ವಸ್ತ್ರಗಳಿಲ್ಲ ಎಂದು ರೋದಿಸುತ್ತ ಕುಳಿತಿದ್ದ ನನಗೆ, ಅಣಕಿಸಿತು "ಅಮ್ಮ ನೋಡು ನಾನು ರಾಜಕುಮಾರ" ಎಂದು ಅಂಗಳದ ನಡುವಲ್ಲಿ ಮಣ್ಣಾಡುತಿದ್ದ |
ಧನ್ಯೆ
ದಯೆ ಕಂಡೆ ಅಮ್ಮನ ಕಣ್ಣಲ್ಲಿ
ಧರ್ಮವ ಕಂಡೆ ಅಪ್ಪನ ನಡೆಯಲ್ಲಿ
ನ್ಯಾಯವ ಕಂಡೆ ಗುರುವಿನ ನುಡಿಯಲ್ಲಿ
ಸ್ನೇಹವ ಕಂಡೆ ಗೆಳೆಯರ ನಗುವಲ್ಲಿ
ಧನ್ಯಳಾದೆ ಕಂಡು ಪರಮಾತ್ಮನ
ಒಂದೊಂದು ರೂಪ ಒಬ್ಬೊಬ್ಬರಲ್ಲಿ.
ಧರ್ಮವ ಕಂಡೆ ಅಪ್ಪನ ನಡೆಯಲ್ಲಿ
ನ್ಯಾಯವ ಕಂಡೆ ಗುರುವಿನ ನುಡಿಯಲ್ಲಿ
ಸ್ನೇಹವ ಕಂಡೆ ಗೆಳೆಯರ ನಗುವಲ್ಲಿ
ಧನ್ಯಳಾದೆ ಕಂಡು ಪರಮಾತ್ಮನ
ಒಂದೊಂದು ರೂಪ ಒಬ್ಬೊಬ್ಬರಲ್ಲಿ.
ಜೀವನ
ಜನನ ಮರಣದ ನಡುವೆ ಅರೆಕ್ಷಣದ ಜೀವನ
ಅದಕಾಗಿ ನಡೆಸಿಹರು ಎಲ್ಲೆಲ್ಲೂ ಕದನ
ಸ್ನೇಹ ಸೌಹಾರ್ದಕ್ಕಿಂತ ಅತಿ ಮಿಗಿಲು ಹಣ
ಹಣವಿಲ್ಲದ ಬಡಪಾಯಿ ಜೀವಂತ ಹೆಣ.
ಅದಕಾಗಿ ನಡೆಸಿಹರು ಎಲ್ಲೆಲ್ಲೂ ಕದನ
ಸ್ನೇಹ ಸೌಹಾರ್ದಕ್ಕಿಂತ ಅತಿ ಮಿಗಿಲು ಹಣ
ಹಣವಿಲ್ಲದ ಬಡಪಾಯಿ ಜೀವಂತ ಹೆಣ.
Thursday, July 30, 2009
ಸ್ವಾಗತ
Welcome to my BalaTaranga(ಬಾಳತರಂಗ).
ವರಮಹಾಲಕ್ಷ್ಮಿ ಹಬ್ಬದ ಶುಭದಿನದ ಹೊತ್ತಿಗೆ ರೂಪುಗೊಂಡ ನನ್ನ ಬಾಳತರಂಗಕ್ಕೆ ನಲ್ಮೆಯ ಸ್ವಾಗತ.
ದಿನಗಳೆದಂತೆ ಈ ಬಾಳತರಂಗವನ್ನು ಸುಂದರವಾಗಿಸುವ ಕನಸು ಹೊತ್ತಿರುವ ನಾನು, ನಿಮ್ಮ ಅಮೂಲ್ಯ ಸಲಹೆಗಳಿಂದ ಹುರಿದುಂಬಿಸುವಿರೆಂಬ ಹೊಸ ಭರವಸೆಯೊಂದಿಗೆ ಹೊರಟಿದ್ದೇನೆ.
ಏನಾದರೂ ಮಾಡು ವ್ಯರ್ಥ ಕಾಲಹರಣ ಮಾಡದಿರು ಎಂಬ ಪತಿಯ ಕಿವಿಮಾತಿಗೆ, ಈ ಹೊಸ ಪ್ರಯತ್ನದಲ್ಲಿ ಅವರ ಸಹಕಾರಕ್ಕೆ, ಏನಾದರೂ ಬರೆ ಓದಲು ನಾವಿದ್ದೇವೆ ಎಂಬ ಗೆಳತಿಯರ ಉತ್ತೇಜನಕ್ಕೆ ನನ್ನ ಪ್ರೀತಿಯ ಧನ್ಯವಾದಗಳು.
Subscribe to:
Posts (Atom)


